ಕನ್ನಡ: ENGLISH | HOME |ಮಾಹಿತಿ ಹಕ್ಕು | ಸಂಪರ್ಕಿಸಿ
     

ಜಿಲ್ಲಾ ಪಕ್ಷಿನೋಟ

ಜಲ್ಲಾ ಪಂಚಾಯತ್
ಆಡಳಿತ
ಅಭಿವೃದ್ಧಿ ಯೋಜನೆಗಳು
ಇಲಾಖೆಗಳು
ತಾಲ್ಲೂಕು ಪಂಚಾಯತ್
ಗ್ರಾಮ ಪಂಚಾಯತ್
ಸಂಪನ್ಮೂಲಗಳು
ನಕ್ಷೆಗಳು
ಜಿಲ್ಲಾ ಅಂಕಿಅಂಶಗಳು
ಜಿಲ್ಲಾ ಪ್ರವಾಸಿ ತಾಣಗಳು

ಪ್ರವಾಸೋದ್ಯಮ

ದಾವಣಗೆರೆಯು ರಾಜಧಾನಿ ಬೆಂಗಳೂರಿನಿಂದ 248 ಕಿ.ಮೀ. ದೂರದಲ್ಲಿದೆ.

ವಾಯು ಸಂಚಾರ – ದಾವಣಗೆರೆಯು ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ದಾವಣಗೆರೆಗೆ ಅತೀ ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಹತ್ತಿರದ ನಿಲ್ದಾಣವಾಗಿದೆ..

ರೈಲು ಸಾರಿಗೆ – ದಾವಣಗೆರೆ ಮೀರಜ್, ಅಹ್ಮದಾಬಾದ್, ಮುಂಬೈ, ಬೆಂಗಳೂರು ಮತ್ತು ಮೈಸೂರುಗಳಿಗೆ ನಿಯಮಿತ ರೈಲುಗಳ ಮೂಲಕ ಸಂಪರ್ಕ ಹೊಂದಿದೆ. ಸಿಟಿ ರೈಲ್ವೆ ನಿಲ್ದಾಣವು ನಗರದ ಹೃದಯ ಭಾಗದಲ್ಲಿದೆ.
 

ರಸ್ತೆಯ ಮೂಲಕ - ದಾವಣಗೆರೆ ಪುಣೆ, ಬೆಂಗಳೂರು, ಶಿವಮೊಗ್ಗ ಮತ್ತು ಹೊಸಪೇಟೆ ರಸ್ತೆ ಮೂಲಕ ಸಂಪರ್ಕ ಹೊಂದಿದೆ.

 

ದಾವಣಗೆರೆ ನಕ್ಷೆ

 

ಆಕರ್ಷಣೀಯ ಸ್ಥಳಗಳು:

ಕುಂದವಾಡ ಕೆರೆ – ಕುಂದವಾಡ ಕೆರೆ ದಾವಣಗೆರೆ ನಗರದ ಕುಂದುವಾಡ ಗ್ರಾಮದ ಬಳಿ ಪುಣೆದಿಂದ ಬೆಂಗಳೂರಿಗೆ (ಎನ್.ಹೆಚ್-4 ಬೈಪಾಸ್) ಹೋಗುವ ರಸ್ತೆಯ ಎಡಭಾಗದಲ್ಲಿದೆ. ಕುಂದವಾಡ ಕೆರೆ ಸಂಗ್ರಹಣಾ ಪ್ರದೇಶ ಸುಮಾರು 253 ಎಕರೆಗಳು ಇತ್ತೀಚೆಗೆ ಇದನ್ನು ನವೀಕರಿಸಲಾಯಿತು ಮತ್ತು ಬೇಸಿಗೆ ನೀರು ಸಂಗ್ರಹಣಾ ಕೆರೆ ಎಂದು ಪರಿಗಣಿಸಲಾಯಿತು. ಈ ಕೆರೆಯು ಸರಿ ಸುಮಾರು 20 ಎಂ.ಎಲ್.ಡಿ. ಆಗಿದೆ. ಕಳೆದ ಎರಡು ವರ್ಷಗಳಿಂದ ನಗರದ 50% ಕ್ಕಿಂತ ಹೆಚ್ಚು ಪ್ರದೇಶಗಳಿಗೆ ನೀರಿನ ಸೌಲಭ್ಯವನ್ನು ಒದಗಿಸಿದೆ. ಕುಂದವಾಡ ಕೆರೆ ನಗರದ ಸೌಂದರ್ಯ ತಾಣವೇ ಸರಿ. ಈಗ ದಾವಣಗೆರೆ ನಗರದ ಮುನ್ಸಿಪಲ್ ಕೌನ್ಸಿಲ್ ಕುಂದವಾಡ ಕೆರೆಯನ್ನು ''ಕುಂದುವಾಡ ಟ್ಯಾಂಕ್ ಎಸ್.ಎಸ್. ಮಲ್ಲಿಕಾರ್ಜುನ ಸಾಗರ'' ಎಂದು ಮರು ನಾಮಕರಣ ಮಾಡಲು ನಿರ್ಣಯ ಮಾಡಿದೆ.ಾಮಕರಣ ಮಾಡಲು ನಿರ್ಣಯ ಮಾಡಿದೆ.


ಬೇತೂರು - ದಾವಣಗೆರೆ ಜಗಳೂರು ರಸ್ತೆಯಿಂದ 6 ಕಿ.ಮೀ. ದೂರದಲ್ಲಿ, ಆನೆಕೊಂಡದಿಂದ 2 ಕಿ.ಮೀ. ದೂರದಲ್ಲಿರುವ ಬೇತೂರು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಇದು ತ್ರಿಭುವನ ಮಲ್ಯ ಪಾಂಡ್ಯರ ರಾಜಧಾನಿಯಾಗಿತ್ತು. ಬೇತೂರು ರಾಜಧಾನಿಯಾಗಿದ್ದಾಗ, ದಾವಣಗೆರೆ ಬೇತೂರಿನ ಒಂದು ಭಾಗವಾಗಿತ್ತು. ರಾಜನು ತನ್ನ ಜಾನುವಾರುಗಳನ್ನು ಇಲ್ಲಿ ಇರಿಸಿಕೊಳ್ಳಲು ಬಳಸುತ್ತಿದ್ದನು. ಪ್ರಾಚೀನ ಮತ್ತು ಕಲಾತ್ಮಕ ಕಲ್ಲೇಶ್ವರ ದೇವಾಲಯ ಚಾಲುಕ್ಯ ಶೈಲಿಯಲ್ಲಿ ಕೆತ್ತಲಾಗಿದೆ. ಇತಿಹಾಸದ ಧ್ವನಿ ಮುದ್ರಣ ಮತ್ತು ಚಿತ್ರಣಗಳು, ಕಲಾತ್ಮಕ ಶಿಲಾಶಾಸನಗಳು ಮತ್ತು ವಿಜಯದ ಕಂಬಗಳು ನಂದಿಯ ಮೇಲೆ ಸುಂದರವಾದ ನಟರಾಜ ಮತ್ತು ಶಿವ-ಪಾರ್ವತಿ ವಿಗ್ರಹಗಳಿವೆ. ಸಪ್ತಮಾತೃಕೆಗಳು ಮುಚಗಿ ಮೊನೊಲಿತಿಹಿಕ ಶಿಲ್ಪಗಳಿವೆ.

ಸೂಳೆಕೆರೆ – ಸೂಳೆಕೆರೆಯು ದಾವಣಗೆರೆಯಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ, ಈ ಕೆರೆಯು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಭಾರತದ ಅತಿ ದೊಡ್ಡ ಕೆರೆಯಾಗಿದ್ದು ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾಗಿದೆ. ಪ್ರವಾಸಿಗರು ಈ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಈ ಕೆರೆಯ ಬಳಿ          ಶ್ರೀ ಸಿದ್ದೇಶ್ವರ ದೇವಾಲಯವೂ ಇದೆ.

   
ಬಾಗಳಿ – ಹರಪನಹಳ್ಳಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಬಾಗಳಿ ಎಂಬಲ್ಲಿ ಚಾಲುಕ್ಯ ಕಾಲದ 9ನೇ ಶತಮಾನದ ಕಲ್ಲೇಶ್ವರ ದೇವಸ್ಥಾನವಿದೆ. ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಪಂಚಲಿಂಗ ದೇವಸ್ಥಾನಗಳಿವೆ ಮತ್ತು ಸುಂದರವಾಗಿ ಕೆತ್ತಲ್ಪಟ್ಟ ಉಗ್ರನರಸಿಂಹ ವಿಗ್ರಹವಿದೆ. ದೇವಾಲಯದ ಹೊರ ಗೋಡೆಗಳು ಶಿಲಾ ಬಾಲಕಿಯರ ಶಿಲ್ಪವನ್ನು ಹೊಂದಿದೆ. ದೇವಾಲಯದ ಒಳಗಿನ ಕಂಬಗಳು ಸೂಕ್ಷ್ಮ ಕೆತ್ತನೆಗಳನ್ನು ಹೊಂದಿವೆ
   

ಕಾರಂಜಿ ಮಂಟಪ – ಜಿಲ್ಲೆಯಿಂದ 36 ಕಿ.ಮೀ. ದೂರದಲ್ಲಿ ಸುಂದರವಾದ ಸಂತೆಬೆನ್ನೂರು ಕೆರೆ ದಕ್ಷಿಣ ಭಾರತದಲ್ಲಿನ ಓಸ್ಟ್ ಎಂದು ಖ್ಯಾತಿ ಪಡೆದಿದೆ. ಕೆರೆಯ ಮಧ್ಯದಲ್ಲಿ ಕಲ್ಲಿನ ರಥವನ್ನು ಹೋಲುವ ಅದ್ಭುತ  ಶಿಲ್ಪ ಕಲಾಕೃತಿ ಇದ, ಇದು ಎಲ್ಲಾ ನಾಲ್ಕು ದಿಕ್ಕುಗಳಿಂದಲೂ ಒಂದೇ ರೀತಿ ಕಾಣುತ್ತದೆ.

                   ಸಂತೆಬೆನ್ನೂರು ಕೆಂಗಾ ಹನುಮಂತಪ್ಪ ಎಂಬ ನಾಯಕ ಕ್ರಿ.ಶ. 16ನೇ ಶತಮಾನದಲ್ಲಿ ಕುಶ್ಮಾಂಡ ಶೈಲಿಯಲ್ಲಿ ಪುಷ್ಕರಣಿಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಿದ್ದಾನೆ. ಪುಷ್ಕರಣಿ ಮೂಲತಃ ಎಂಟು ಮಂಟಪಗಳನ್ನು ಹೊಂದಿದ್ದು, ಅದರಲ್ಲಿ ಕೇವಲ 6 ಮಾತ್ರ ಇದೆ. ಪುಷ್ಕರಣಿ ಪಶ್ಚಿಮದ ಮುಖ್ಯ ಪ್ರವೇಶ ದ್ವಾರದಿಂದ 52 ಮೆಟ್ಟಿಲುಗಳಿವೆ. ಇತರ ಮೂರು ಕಡೆಗಳಲ್ಲಿ 44 ಮೆಟ್ಟಿಲುಗಳಿವೆ. ಇದು ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾದ ಈ ಮಹಾನ್ ಮಂಟಪವು ನಾಲ್ಕು ಚಕ್ರಗಾಲಿಯನ್ನು ಹೊಂದಿದೆ. ಸ್ಥಳೀಯರು ಇದನ್ನು 'ಕಾರಂಜಿ ಮಂಟಪ' ಎಂದು ಕರೆಯುತ್ತಾರೆ. ಮಂಟಪಕ್ಕಿಂತ ಕೆಳಗಿರುವ ನೀರಿನ ಮೇಲ್ಬಾಗವು ಮೇಲಿನಿಂದ ಹೊರ ಹೊಮ್ಮುವ ವ್ಯವಸ್ಥೆಯನ್ನು ಹೊಂದಿದೆ.
   


ಆನೆಕೊಂಡ - ದಾವಣಗೆರೆಯ ಜಗಳೂರು ರಸ್ತೆಯಲ್ಲಿ ಸುಮಾರು 4 ಕಿ.ಮೀ ದೂರದಲ್ಲಿ ಆನೆಕೊಂಡ ಎಂಬ ಗ್ರಾಮವು ಇರುತ್ತದೆ. ಆನೆಕೊಂಡ ಎಂಬ ಹೆಸರು ಬರಲು ಕಾರಣವೇನೆಂದರೆ ಈ ಗ್ರಾಮದಲ್ಲಿ ಆನೆಗಳನ್ನು ಕಟ್ಟುತ್ತಿದ್ದ ಸ್ಥಳವು ಒಂದು ಐತಿಹಾಸಿಕ ಅರಮನೆಯಾಗಿದೆ. ದಂಥ ಕಥೆಯ ಪ್ರಕಾರ, ಬೇತೂರು ರಾಜಧಾನಿಯಾಗಿದ್ದಾಗ, ರಾಜನ ಆನೆಗಳನ್ನು ಇಲ್ಲಿ ಕಟ್ಟುತ್ತಿದ್ದರು ಮತ್ತು ಆ ಹೆಸರಿನಿಂದಲೇ ಆನೆಕೊಂಡ ಎಂದು ಹೆಸರು ಬರಲು ಕಾರಣವಾಯಿತು, 11 ಮತ್ತು 12ನೇ ಶತಮಾನದ ಅವಧಿಯಲ್ಲಿ ದೊಡ್ಡ ನಗರವಾಗಿತ್ತು. ಈ ಸ್ಥಳದಲ್ಲಿ ಗಂಗರು, ಉಚ್ಚಂಗಿ ಪಾಂಡ್ಯರು, ಚಾಲುಕ್ಯರು ಮತ್ತು ಹೊಯ್ಸಳರ ಅನೇಕ ಶಿಲಾ ಶಾಸನಗಳನ್ನು ಹೊಂದಿದೆ.