HOME| RIGHT TO INFORMATION | SITE MAP | CONTACT US
     

ಜಿಲ್ಲಾ ಪಕ್ಷಿನೋಟ

ಜಲ್ಲಾ ಪಂಚಾಯತ್
ಆಡಳಿತ
ಅಭಿವೃದ್ಧಿ ಯೋಜನೆಗಳು
ಇಲಾಖೆಗಳು
ತಾಲ್ಲೂಕು ಪಂಚಾಯತ್
ಗ್ರಾಮ ಪಂಚಾಯತ್
ಸಂಪನ್ಮೂಲಗಳು
ನಕ್ಷೆಗಳು
ಜಿಲ್ಲಾ ಅಂಕಿಅಂಶಗಳು
ಜಿಲ್ಲಾ ಪ್ರವಾಸಿ ತಾಣಗಳು

ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಪಂಚಾಯತ್ ಕಛೇರಿಯ ಮುಖ್ಯಸ್ಥರಾಗಿರುತ್ತಾರೆ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯು ಜಿಲ್ಲಾ ಪಂಚಾಯತ್ ನ ಆಡಳಿತಾತ್ಮಕ ವಿಷಯಗಳನ್ನು ಪಾಲಿಸಲು ಜವಾಬ್ದಾರಿಯುಳ್ಳವರಾಗಿರುತ್ತಾರೆ
         

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲೆಯ ಜಿಲ್ಲಾಧಿಕಾರಿ ವೃಂದಕ್ಕೆ ಸಮಾನ ವೃಂದದ ಅಧಿಕಾರಿಯಾಗಿರುತ್ತಾರೆ. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿರುತ್ತಾರೆ. ಹಿರಿಯ ವೃಂದದ ಇತರೆ ಅಧಿಕಾರಿಗಳ ಸಹಕಾರದೊಂದಿಗೆ ಜಿಲ್ಲಾ ಪಂಚಾಯತಿಯ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಉಪಕಾರ್ಯದರ್ಶಿ(ಆಡಳಿತ/ಅಭಿವೃದ್ಧಿ)
ಯೋಜನಾ ನಿರ್ದೇಶಕರು(ಡಿಆರ್ ಡಿಎ)
ಮುಖ್ಯ ಲೆಕ್ಕಾಧಿಕಾರಿ
ಮುಖ್ಯ ಯೋಜನಾಧಿಕಾರಿ

 

ಜಿಲ್ಲಾ ಪಂಚಾಯತ್ ನ ಶಾಖೆಗಳು:

  • ಆಡಳಿತ ಶಾಖೆ
  • ಅಭಿವೃದ್ಧಿ ಶಾಖೆ
  • ಯೋಜನಾ ಶಾಖೆ
  • ಲೆಕ್ಕಪತ್ರ ಶಾಖೆ
  • ಪರಿಷತ್ ಶಾಖೆ

ಆಡಳಿತ ಶಾಖೆ : ಆಡಳಿತ ಶಾಖೆಯು ಉಪಕಾರ್ಯದರ್ಶಿಯವರ ನೇತೃತ್ವದಲ್ಲಿರುತ್ತದೆ ಜಿಲ್ಲಾ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಗಳ ಸಾಮಾನ್ಯ ಆಡಳಿತ ನಿರ್ವಹಣೆ

ಅಭಿವೃದ್ಧಿ ಶಾಖೆ: ಎಲ್ಲಾ ಗ್ರಾಮೀಣಾಭಿವೃದ್ಧಿ ಯೋಜನೆಗಳು, ನೀರು ಪೂರೈಕೆ ಯೋಜನೆಗಳು, ಸಣ್ಣ ನೀರಾವರಿ, ರಸ್ತೆ ಕೆಲಸಗಳು

ಲೆಕ್ಕ ಪತ್ರ ಶಾಖೆ: ಮುಖ್ಯ ಲೆಕ್ಕಾಧಿಕಾರಿಯವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಬರುವ ಎಲ್ಲಾ ಇಲಾಖೆಗಳಿಗೆ ವಿವಿಧ  ಅಭಿವೃದ್ಧಿ ಯೋಜನೆಗಳಡಿಯಲ್ಲಿ ಹಣವನ್ನು ಬಿಡುಗಡೆ ಮಾಡುವುದು ಮತ್ತು ಹಣ(ರಶೀದಿ)ಪಡೆಯುವುದು  ಹಾಗೂ ಎಲ್ಲಾ ಇಲಾಖೆಗಳ ಲೆಕ್ಕ ಪರಿಶೋಧನೆ ನಡೆಸುವುದು ಇವರ ಕರ್ತವ್ಯವಾಗಿದೆ.

ಯೋಜನಾ ಶಾಖೆ : ಮುಖ್ಯ ಯೋಜನಾಧಿಕಾರಿಯವರ ನೇತೃತ್ವದಲ್ಲಿ ವಾರ್ಷಿಕ ಕರಡು ಯೋಜನೆಯನ್ನು ರೂಪಿಸುವುದು ಅಭಿವೃದ್ಧಿ ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸುವುದು, ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಇವರ ಕರ್ತವ್ಯವಾಗಿದೆ..

ಸಹಾಯಕ ಕಾರ್ಯದರ್ಶಿಯವರ ನೇತೃತ್ವದಲ್ಲಿ ಜಿಲ್ಲೆಯ ಪಂಚಾಯತಿ ಮತ್ತು ವಿವಿಧ ಸ್ಥಾಯಿ ಸಮಿತಿಗಳು ಚರ್ಚೆಗಳು ಅದರಲ್ಲಿ ತೆಗೆದುಕೊಂಡ ವಿವಿಧ ನಿರ್ಧಾರಗಳನ್ನು ಅನುಸರಿಸಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯರ ಬಗ್ಗೆ ಇತರೆ ವಿಷಯಗಳು.